ಹಿಂದುಳಿದಿರುವಿಕೆಯ ಮೇಲೆ ಆದ್ಯತೆ

ಡಾ|| ನಂಜುಂಡಪ್ಪರವರ ನೇತೃತ್ವದ ಪ್ರಾದೇಶಿಕ ಅಸಮಾನತೆಯ ಹೈಪವರ್ ಕಮಿತಿ (HPCFRRI) ವರದಿಯಂತೆ ಹಿಂದುಳಿದ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಹಾಗೂ ಮುಂದುವರಿದ ತಾಲ್ಲೂಕಿನ ಮಟ್ಟಕ್ಕೆ ಹಿಂದುಳಿದ ತಾಲ್ಲೂಕನ್ನು ಸರಿದೂಗಿಸುವ ಹಾಗೂ ಮಲೆನಾಡು ಪ್ರದೇಶದಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಸೌಕರ್ಯ ದಗಿಸಲು ಮಂಡಳಿಯು ರಚನೆಯಾಗಿರುತ್ತದೆ.

ಸದರಿ ಕಮಿತಿಯ ಸಲಹೆಯಂತೆ ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿಯ ಅಡಿಯಲ್ಲಿ ಬರುವ ಹಿಂದುಳಿಕೆಯ ಆಧಾರದ ಮೇಲೆ ಮೂರು ವಿಭಾಗಗಳಾಗಿ ವಿಂಗಡಿಸಿದ್ದು, ಈ ಕೆಳಕಂಡಂತೆ ಇರುತ್ತದೆ.

ವಾರ್ಷಿಕ ಕ್ರಿಯಾ ಯೋಜನೆಯಡಿಯಲ್ಲಿ ಹಣದ ಹಂಚಿಕೆಯನ್ನು ಈ ಕೆಳಕಂಡಂತೆ ಮಾಡಲಾಗಿದೆ.

ಪ್ರದೇಶ ಅತಿ ಹೆಚ್ಚು ಹಿಂದುಳಿದಿರುವ ತಾಲ್ಲೂಕುಗಳು ಹೆಚ್ಚು ಹಿಂದುಳಿದಿರುವ ತಾಲ್ಲೂಕುಗಳು ಹಿಂದುಳಿದಿರುವ ತಾಲ್ಲೂಕುಗಳು
ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿ ವ್ಯಾಪ್ತಿಯಲ್ಲಿ 2 14 10
ಒಟ್ಟು ರಾಜ್ಯದಲ್ಲಿ 39 40 35

ಡಾ|| ನಂಜುಂಡಪ್ಪ ಕಮಿಟಿಯ ವರದಿಯ ಆಧಾರದ ಮೇಲೆ 2 ಅತಿ ಹೆಚ್ಚು ಹಿಂದುಳಿದ ತಾಲ್ಲೂಕುಗಳಿಗೆ ವಾರ್ಷಿಕ ಕ್ರಿಯಾ ಯೋಜನೆಯನ್ನು ತಯಾರಿಸುವಾಗ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.