ಮಂಡಳಿ ವತಿಯಿಂದ ಆಯೋಜಿಸುವ ಅಭಿವೃದ್ಧಿ ಕಾರ್ಯಕ್ರಮಗಳ ಪಕ್ಷಿನೋಟ

ಭವಿಷ್ಯ ಭಾರತದ ನಿರ್ಮಾಣಕ್ಕೆ ಯುವಜನತೆಯ ಸರ್ವತೋಮುಖ ಬೆಳವಣಿಗೆ ಅನುಕೂಲಕರವಾದ ವಾತವರಣ ಸೃಜಿಸುವ ಹಿನ್ನೆಲೆಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಅವರುಗಳನ್ನು ಶಾಲೆಗೆ ಕರೆತರುವ ರೀತಿಯಲ್ಲಿ ಹಾಗೂ ಸ್ವಯಂ ಪ್ರೇರಿತವಾಗಿ ಶಾಲೆಗಳಿಗೆ ಬರುವ ತರಹ ಆಕರ್ಶಣಿಯವಾದ ವಾತವರಣವನ್ನು ಸೃಷ್ಟಸಲು ಅಂಗನವಾಡಿ ಕೇಂದ್ರಗಳಲ್ಲಿ ಜೋಕಾಲಿ, ಜಾರಬಂಡಿಗಳು, ಬಣ್ಣ ಬಣ್ಣದ ಇತರೆ ಆಧುನಿಕ ಆಟದ ಸಾಮಗ್ರಿಗಳನ್ನು ಅಂಗನವಾಡಿ / ಶಾಲೆಯ ಅಂಗಳಗಳಲ್ಲಿ ಅಳವಡಿಸುವಂತಹ ಯೋಜನೆಯನ್ನು ಮಂಡಳಿಯಿಂದ ಪ್ರಸ್ತಾಪಿಸಲಾಗಿದೆ.

ಬಹುತೇಕ ಎಲ್ಲಾ ಖಾಸಗಿ ಶಾಲೆಗಳಲ್ಲಿ ಆಕರ್ಶಣಿಯವಾದ ಆಟಿಕೆಗಳ ಜೊತೆ ನೋಡಿ ಕಲಿ / ಮಾಡಿ ಕಲಿ ಎಂಬ ವಸ್ತುಗಳನ್ನು ಒದಗಿಸುವುದರಿಂದ ಚಿಕ್ಕಮಕ್ಕಳು ಖುಷಿಯಿಂದ ಶಾಲೆಗೆ ಬಂದು ಅಕ್ಷರ ಕಲಿಕೆ ಜೊತೆಗೆ ದೈಹಿಕ ಸದೃಢತೆಗೂ ಸಹ ಸಾಧ್ಯವಿರುತ್ತದೆ.

ದಿನಾಂಕ: 01-06-2010 ರ ಮಂಡಳಿಯ ಸರ್ವ ಸದಸ್ಯರ ಸಭೆಯಲ್ಲಿ ಅತಿ ಹಿಂದುಳಿದ ತಾಲ್ಲೂಕುಗಳಲ್ಲಿನ ಸರ್ಕಾರದ ಅಂಗನವಾಡಿ ಕೇಂದ್ರಗಳನ್ನು “ಚಿನ್ನರ ಲೋಕ” ಶೀರ್ಷಿಕೆ ಅಡಿಯಲ್ಲಿ ಅಭಿವೃದ್ಧಿ ಪಡಿಸಲು ರೂ. 80,000/- ವೆಚ್ಚದಲ್ಲಿ ಆಟಿಕೆಗಳನ್ನು ಮತ್ತು ಆಕರ್ಶಣಿಯವಾದ ವಸ್ತುಗಳನ್ನು ಖರೀದಿಸಲು ಕಾರ್ಯಕ್ರಮ ರೂಪಿಸಿ ಮೈಸೂರು ಜಿಲ್ಲೆ, ಹೆಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಕಾರ್ಯರೂಪಕ್ಕೆ ತಂದು ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ ಸರ್ಕಾರಿ ಅಂಗನವಾಡಿ ಕೇಂದ್ರಗಳಿಗೆ ಮಕ್ಕಳನ್ನು ಕಳುಹಿಸಲು ಪೋಷಕರ ಮನವಲಿಸಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗೆ ಬರುವ ಹಾಗೇ ಪ್ರೇರೆಪಿಸಲಾಗಿರುತ್ತದೆ.

ಕೃಷಿ ಘಟಕ ಸ್ಥಾಪನೆ

2007-08ನೇ ಸಾಲಿನಲ್ಲಿ ಮಂಡಳಿಯ ವತಿಯಿಂದ ಆಯ್ದ ಪರಿಶಿಷ್ಟ ಜಾತಿಯ ಫಲಾನುಭವಿಗಳಿಗೆ ಕೃಷಿ ಉತ್ಪನ್ನವನ್ನು ಹೆಚ್ಚಿಸುವ ಸಲುವಾಗಿ ನೀರಾವರಿ ಸೌಲತ್ತುಗಳನ್ನು ಒದಗಿಸಲಾಗಿರುತ್ತದೆ. ಕೇವಲ ನೀರಾವರಿ ಸೌಲತ್ತುಗಳನ್ನು ಒದಗಿಸುವದರಿಂದ ಅವರ ಆರ್ಥಿಕ ಸ್ಥಿತಿಯನ್ನು ಬದಲಿಸಲು ಸಾಧ್ಯವಿಲ್ಲವೆಂಬ ವಿಷಯವನ್ನು ಅವಲೋಕಿಸಿ ಸರ್ಕಾರೇತರ ಸಂಸ್ಥೆಗಳಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಫಲಾನುಭವಿಗಳಿಗೆ ಕೃಷಿ ವಿಜ್ಞಾನದಲ್ಲಿ ತರಬೇತಿ ನೀಡಿ ಆಧುನಿಕ ಬೇಸಾಯ ಪದ್ದತಿಗಳು ಹಾಗೂ ಕಾಲ ಕಾಲಕ್ಕೆ ಆರ್ಥಿಕವಾಗಿ ಲಾಭ ನೀಡುವಂತ ಬೆಳೆಗಳನ್ನು ಬೆಳೆಯುವ ಪದ್ದತಿಯ ಅನುಸರಣೆ ಕುರಿತಂತೆ ತರಬೇತಿ ನೀಡುವ ಮೂಲಕ ಮಾಹಿತಿ ಒದಗಿಸುವ ಕಾರ್ಯವನ್ನು ಮಂಡಳಿ ವತಿಯಿಂದ ಪ್ರಯತ್ನಿಸಲಾಗಿದೆ. 2010-11ನೇ ಸಾಲಿನ ವಿಶೇಷ ಘಟಕ ಯೋಜನೆ ಅಡಿ “ಕೃಷಿ ಘಟಕ ಯೋಜನೆಗೆ” ರೂ 30.00 ಲಕ್ಷಗಳ ಅನುದಾನ ಒದಗಿಸಲಾಗಿದೆ.

ಜಲ ವಿದ್ಯುತ್ ಘಟಕಗಳ ಸ್ಥಾಪನೆ

ಮಲೆನಾಡು ಪ್ರದೇಶ ವ್ಯಾಪ್ತಿಯಲ್ಲಿ ಹಲವಾರು ಗ್ರಾಮಗಳಿಗೆ ಸಂಪರ್ಕ ರಸ್ತೆಗಳು, ವಿದ್ಯುಚ್ಛಕ್ತಿ ಸರಬರಾಜು ಹಾಗೂ ಕುಡಿಯುವ ನೀರಿನ ಸೌಕರ್ಯ ಇಲ್ಲದಿದ್ದು, ದೂರದ ಪ್ರದೇಶಗಳಲ್ಲಿರುವ ಈ ಗ್ರಾಮಗಳಿಗೆ ನೀಡಿರುವ ವಿದ್ಯುತ್ ಸರಬರಾಜು ಸಹ ಗುಡುಗು ಸಿಡಿಲಿನ ಸಂದರ್ಭದಲ್ಲಿ ಹಾಗೂ ಹೆಚ್ಚಿನ ಮಳೆಯ ಕಾಲದಲ್ಲಿ ಕೈಕೊಡುತ್ತಿದ್ದನ್ನು ಅರಿತು ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಸರ್ವೇ ನಡೆಸಿದ ನ್ಯಾಷನಲ್ ಇನ್ನೋವೇಟಿವ್ ಪೌಂಡೇಷನ್, ಅಹಮದಾಬಾದ್ ಇಂಡಿಯನ್ ಇನ್ ಸ್ಟೀಟ್ಯೂಟ್ ಆಫ್ ಟೆಕ್ನಾಲಜಿ ಕಾನಪುರ ಮತ್ತು ಮೆ| ಟರ್ಬೋ, ಟರ್ಬನ್ ಲೈಟ್ಸ್, ಜೈಪುರ ರವರು ಸುಮಾರು 10790 ಸ್ಥಳಗಳಲ್ಲಿ ಜಲ ವಿದ್ಯುತ್ ಅನ್ನು ನೈಸರ್ಗಿಕವಾಗಿ ಹರಿಯುವ ನದಿಗಳ ನೀರಿನ ಮಟ್ಟ ಮತ್ತು ನೀರಿನ ರಭಸದಿಂದ ಸಣ್ಣ ಪ್ರಮಾಣದಲ್ಲಿ ಉತ್ಪಾದಿಸಬಹುದು ಎಂಬುದಾಗಿ ವರದಿ ನೀಡಿದ್ದು, ಚಿಕ್ಕಮಗಳೂರು ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ ಜಲ ವಿದ್ಯುತ್ ಉತ್ಪಾದನಾ ಘಟಕಗಳ ಸ್ಥಾಪನೆಗೆ ಯೋಜನೆ ರೂಪಿಸಿ ಅವುಗಳ ನಿರ್ವಹಣೆ ಕಾರ್ಯವನ್ನು ಗ್ರಾಮ ಪಂಚಾಯತ್ ನೀಡಲು ಕಾರ್ಯಕ್ರಮವನ್ನು ರೂಪಿಸಲಾಗಿರುತ್ತದೆ.

ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆ

ಶುದ್ದ ಕುಡಿಯುವ ನೀರಿನ ಬಳೆಯು ಎಲ್ಲಾ ಸಾಮಾನ್ಯರ ಆದ್ಯ ಬೇಡಿಕೆಯಾಗಿದ್ದು, ನ್ಯಾಷನಲ್ ಕೋಲಾಟರಲ್ ಮ್ಯಾನೇಜ್ ಮೆಂಟ್ ಸರ್ವಿಸಸ್ ಲಿಮಿಟೆಡ್ ರವರು ಕೆಲವು ಆಯ್ದ ಚಿಕ್ಕಮಗಳೂರು ಜಿಲ್ಲೆ ಕಡೂರು ಗ್ರಾಮಗಳಲ್ಲಿ ದೊರೆಯುವ ನೀರಿನ್ನು ಪರೀಕ್ಷಿಸಿದ್ದು, ಆ ನೀರಿನಲ್ಲಿ ಪ್ಲೋರೈಡ್ ಅಂಶ & ಟಿ.ಡಿ.ಎಸ್ ಹೆಚ್ಚಿನ ಪ್ರಮಾಣದಲ್ಲಿದ್ದು, ಕುಡಿಯಲು ಯೋಗ್ಯವಿಲ್ಲವೆಂದು ನೀಡಿರುವ ವರದಿಯ ಆಧಾರದ ಮೇಲೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ನೋಂ) ರವರ ಸಹಯೋಗದೊಂದಿಗೆ ಮಲೆನಾಡು ಪ್ರದೇಶ ವ್ಯಾಪ್ತಿಯ ಗ್ರಾಮಗಳಲ್ಲಿ ರೂ. 10.00 ಲಕ್ಷ ವೆಚ್ಚದಲ್ಲಿ ಶುದ್ದಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿ ಸದರಿ ಸಂಸ್ಥೇಯವರು ನಿರ್ವಹಣೆ ಮಾಡುತ್ತಿದ್ದಾರೆ.

ತ್ಯಾಜ್ಯ ಸಂಸ್ಕರಣಾ ಘಟಕಗಳ ಸ್ಥಾಪನೆ

ಮಲೆನಾಡು ಪ್ರದೇಶ ವ್ಯಾಪ್ತಿಯ ಸಣ್ಣ ಪಟ್ಟಣಗಳಲ್ಲಿನ ವಾಣಿಜ್ಯ ಕೇಂದ್ರಗಳಾದ ಹೋಟೆಲ್ ಗಳು, ಅಂಗಡಿಗಳು ಹಾಗೂ ವಾಸ ಸಂಕೀರ್ಣಗಳಲ್ಲಿ ಉತ್ಪತ್ತಿಯಾಗುವ ವಿಷಪೂರಿತ ದ್ರವ ತ್ಯಾಜ್ಯವನ್ನು ಆಧುನಿಕ ವ್ಯವಸ್ತೆಯಲ್ಲಿ ಸಂಸ್ಕರಿಸಿ ತೋಟಗಾರಿಕೆ ಚಟುವಟಿಕೆಗಳಿಗೆ ಬಳಸಲು ಯೋಜನೆಯನ್ನು ರೂಪಿಸಲಾಗಿದೆ. ಕೇಂದ್ರ ಪರಿಸರ ನಿಯಂತ್ರಣಾ ಬೋರ್ಡ್ ನಿಯಮಾನುಸಾರ ದ್ರವ ತ್ಯಾಜ್ಯವನ್ನು ಸಂಸ್ಕರಿಸಲು ಹಾಗೂ ನೈಸರ್ಗಿಕ ವಲಯವನ್ನು ಹರಿದು ಬಿಡುವಂತೆ ಕಾರ್ಯಕ್ರಮ ರೂಪಿಸಲು ಯೋಜನೆಯನ್ನು ಮಾಡಲಾಗಿದೆ.

ಮಂಡಳಿಯ ಇತರೆ ಕಾರ್ಯಗಳು

2010-11ನೇ ಸಾಲಿನಲ್ಲಿ 10 ತೂಗು ಸೇತುವೆ ಮತ್ತು ಕಾಲುಸಂಕಗಳನ್ನು ನಿರ್ಮಿಸಿ ಗ್ರಾಮೀಣ ಪ್ರದೇಶದ ಸಾರ್ವಜನಿಕರ ಅನುಕೂಲಕರವಾದ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ. 2011-12ನೇ ಸಾಲಿನಲ್ಲಿ 8 ಕಾಲುಸಂಕಗಳನ್ನು ನಿರ್ಮಿಸಲಾಗಿದೆ.

ಮಂಡಳಿಯು ಪ್ರಾರಂಭವಾದಂದಿನಿಂದ ಈವರೆಗೆ ಸಿ.ಸಿ.ರಸ್ತೆ ನಿರ್ಮಾಣ, ಸಮುದಾಯ ಭವನಗಳು, ಶಾಲಾಕಟ್ಟಡಗಳು, ಅಂಗನವಾಡಿ ಕೇಂದ್ರಗಳು, ತೂಗುಸೇತುವೆ, ಕಾಲುಸಂಕ, ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆ ಈ ರೀತಿ ಸುಮಾರು 19913 ಕಾಮಗಾರಿಗಳನ್ನು ನಿರ್ವಹಿಸಲಾಗಿದೆ.