ಗುರಿ

ಜಿಲ್ಲೆ ಮತ್ತು ಜಿಲ್ಲೆಗಳಲ್ಲಿನ ಹಾಗೂ ತಾಲ್ಲೂಕು ಮತ್ತು ತಾಲ್ಲೂಕುಗಳಲ್ಲಿನ ಮೂಲಭೂತ ಸೌಕರ್ಯದ ವ್ಯತ್ಯಾಸವನ್ನು ಮತ್ತು ಪ್ರಾಂತೀಯ ಅಸಮತೊಲನವನ್ನು ಸರಿದೂಗಿಸಲು, ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿಯಿಂದ ಕ್ರಮವಹಿಸುವುದು.

ಉದ್ದೇಶಗಳು

ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಈ ಕೆಳಕಂಡ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ.

  • ಪ್ರಾಂತೀಯ ಅಭಿವೃದ್ಧಿಯಲ್ಲಿನ ವ್ಯತ್ಯಾಸ, ಒಟ್ಟಾರೆ ಬೇರೆ ಬೇರೆ ಪ್ರದೇಶಗಳಲ್ಲಿನ ಹಿಂದುಳಿಕೆಯನ್ನು ನಿವಾರಿಸುವುದು.

  • ಅಭಿವೃದ್ದಿಯಲ್ಲಿ ಕಂಡು ಬಂದಿರುವ ವ್ಯತ್ಯಾಸವನ್ನು ನಿವಾರಣೆ ಮಾಡಲು ಯೋಜನೆಗಳನ್ನು ನಿಯಮಿತ ಕಾಲದಲ್ಲಿ ಕ್ರಿಯಾ ಯೋಜನೆಯನ್ನು ಜನಪ್ರತಿನಿಧಿಗಳ ಜೊತೆಗೆ ಚರ್ಚಿಸಿ ಅನುಷ್ಟಾನಗೊಳಿಸುವುದು. ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಹಾಗೂ ಅನುಷ್ಟಾನ ಇಲಾಖೆಗಳನ್ನು ತೊಡಗಿಸಿಕೊಂಡು ಯೋಜನೆಯ ಅನುಷ್ಟಾನವಾಗಿರುವ ಬಗ್ಗೆ ಮೌಲ್ಯ ಮಾಪನ ಮಾಡುವುದು.