ಮೇಲ್ವಿಚಾರಣ

ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿಯ ಅಧಿಕಾರಿಗಳು ಪದೇ ಪದೇ ಕಾಮಗಾರಿಗಳನ್ನು ಪರಿಶೀಲಿಸುತ್ತಿದ್ದಾರೆ. ಪ್ರತೀ ತಿಂಗಳು 10 ರಿಂದ 15 ಕಾಮಗಾರಿಗಳನ್ನು ಪರಿಶೀಲಿಸಿ ಪರಿಶೀಲನಾ ವರದಿಯನ್ನು ನೀಡಲಾಗುತ್ತದೆ. ಜನಪ್ರತಿನಿಧಿಗಳು / ಸಾರ್ವಜನಿಕರಿಂದ ಬಂದಂತಹ ದೂರುಗಳನ್ನು ಪರಿಶೀಲಿಸಿ ಅನುಷ್ಟಾನಾಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳಲು ಸೂಚಿಸಲಾಗುತ್ತದೆ.

ಮೌಲ್ಯಮಾಪನ

13 ಜಿಲ್ಲೆಯಲ್ಲಿ ಅನುಮೋದನೆಯಾದ ಕಾಮಗಾರಿಯ ಪ್ರಗತಿಯನ್ನು ಆಗಿಂದಾಗ್ಗೆ ಪರಿಶೀಲಿಸಿ ಹೆಚ್ಚಿನ ಪ್ರಗತಿಯನ್ನು ಸಾಧಿಸಲು ಕ್ರಮವಹಿಸಲಾಗುತ್ತಿದೆ. ಕಾಮಗಾರಿಯ ಗುಣಮಟ್ಟವನ್ನು ಮಂಡಳಿಯ ಅಧಿಕಾರಿಗಳು / ಮೂರನೇ ಸಂಸ್ಥೆಯಿಂದ ಪರಿಶೀಲಿಸಲು ಕ್ರಮವಹಿಸಲಾಗಿದೆ. ಕಾಮಗಾರಿಯ ಮೌಲ್ಯಮಾಪನವನ್ನು ಸೆಂಟರ್ ಪಾರ್ ಮಲ್ಟಿ ಡಿಸ್ ಪ್ಲನರಿ ಡೆವೆಲಪ್ ಮೆಂಟ್ ರೀಸರ್ಚ್ ಸಂಸ್ಥೆಯ ಮೂಲಕ ಮಾಡಲಾಗುತ್ತಿದೆ.