inner_banner

ಮಂಡಳಿಯ ಪರಿಚಯ

ವಿಷಯ:1 ಮಲೆನಾಡಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯನ್ನು ರಚಿಸಲಾಗಿದೆ. ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ (ತಿದ್ದುಪಡಿ) ಅಧಿನಿಯಮ 1993 ದಿನಾಂಕ: 18.05.1993 ರಿಂದ ಜಾರಿಗೆ ಬಂದಿದೆ. ಇದರಲ್ಲಿ ಮಂಡಳಿಯ ವಾರ್ಷಿಕ ಕ್ರಿಯಾ ಯೋಜನೆ ತಯಾರಿಸುವುದು ಕಾರ್ಯಕ್ರಮಗಳ ಮತ್ತು ಯೋಜನೆಗಳ ಅನುಷ್ಠಾನ ಹಾಗೂ ಮೇಲ್ವಿಚಾರಣೆಯ ಮತ್ತು ನಿರ್ವಹಣೆಯ ಬಗ್ಗೆ ವಿವರಿಸಿದೆ. ಈ ಅಧಿಸೂಚನೆಯ ಪ್ರಕಾರ ರಾಜ್ಯದ 9 ಜಿಲ್ಲೆಗಳು ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿ ವ್ಯಾಪ್ತಿಗೆ ಒಳಪಟ್ಟಿದ್ದು, ದಿನಾಂಕ: 01.04.1998 ರಿಂದ 13 ಜಿಲ್ಲೆಗಳಾಗಿ ಮರು ವಿಂಗಡಣೆಯಾಗಿದ್ದು ಅವುಗಳ ವಿವರ ಈ ಕೆಳಕಂಡಂತಿದೆ.



ಅನುಸೂಚಿ

ಕ್ರ. ಸಂ ಜಿಲ್ಲೆ ತಾಲ್ಲೂಕು ಸಂಖ್ಯೆ ವಿಧಾನ ಸಭಾ ಕ್ಷೇತ್ರಗಳ ಸಂಖ್ಯೆ
1 ಬೆಳಗಾವಿ ಬೈಲಹೊಂಗಲ, ಬೆಳಗಾವಿ, ಹುಕ್ಕೇರಿ, ಖಾನಾಪುರ, ಸವದತ್ತಿ 5 9
2 ಚಾಮರಾಜನಗರ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಹನೂರು 4 4
3 ಚಿಕ್ಕಮಗಳೂರು ಕಡೂರು, ಕೊಪ್ಪ, ಚಿಕ್ಕಮಗಳೂರು, ಮೂಡಿಗೆರೆ, ಎನ್.ಆರ್.ಪುರ, ಶೃಂಗೇರಿ, ತರೀಕೆರೆ, ಅಜ್ಜಂಪುರ 8 5
4 ದಾವಣಗೆರೆ ಚನ್ನಗಿರಿ, ಹೊನ್ನಾಳಿ, ನ್ಯಾಮತಿ 3 3
5 ಧಾರವಾಡ ಧಾರವಾಢ, ಕಲಘಟಗಿ, ಅಳ್ನಾನವರ 3 3
6 ಹಾಸನ ಆಲೂರು, ಅರಕಲಗೂಡು, ಬೇಲೂರು, ಹಾಸನ, ಸಕಲೇಶಪುರ 5 5
7 ಹಾವೇರಿ ಹಾನಗಲ್, ಹಿರೇಕೆರೂರು, ರೆಟ್ಟಿಹಳ್ಳಿ, ಬ್ಯಾಡಗಿ, ಸವಣೂರು, ಶಿಗ್ಗಾಂವ್ 6 5
8 ಕೊಡಗು ಮಡಿಕೇರಿ, ಸೋಮವಾರಪೇಟೆ, ವೀರಾಜಪೇಟೆ 3 2
9 ದಕ್ಷಿಣ ಕನ್ನಡ (ಮಂಗಳೂರು) ಮಂಗಳೂರು, ಪುತ್ತೂರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿ, ಮೂಡುಬಿದಿರಿ, ಕಡಬ 5 8
10 ಮೈಸೂರು ಹೆಚ್.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣ, ಸರಗೂರು 3 3
11 ಶಿವಮೊಗ್ಗ ಭದ್ರಾವತಿ, ಶಿವಮೊಗ್ಗ, ಸಾಗರ, ಸೊರಬ, ಹೊಸನಗರ, ತೀರ್ಥಹಳ್ಳಿ, ಶಿಕಾರಿಪುರ 7 7
12 ಉಡುಪಿ ಉಡುಪಿ, ಕುಂದಾಪುರ, ಕಾರ್ಕಳ, ಬ್ರಹ್ಮಾವರ, ಕಾಪು, ಬೈಂದೂರು, ಹೆಬ್ರಿ 3 5
13 ಉತ್ತರ ಕನ್ನಡ ಅಂಕೋಲ, ಭಟ್ಕಳ, ಹಳಿಯಾಳ, ಹೊನ್ನಾವರ, ಕಾರವಾರ, ಕುಮಟಾ, ಮುಂಡಗೋಡು, ಸಿದ್ಧಾಪುರ, ಶಿರಸಿ, ಜೋಯಿಡಾ, ಯಲ್ಲಾಪುರ, ದಾಂಡೇಲಿ 11 6
ಒಟ್ಟು 74 65
ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿಗೆ ಸರ್ಕಾರವು ಮಂಜೂರು ಮಾಡಿದ ಹುದ್ದೆಗಳ ವಿವರ, ಭರ್ತಿ ಮಾಡಿದ ಹುದ್ದೆಗಳು ಮತ್ತು ಖಾಲಿ ಇರುವ ಹುದ್ದೆಗಳ ವಿವರಗಳನ್ನು ಈ ಕೆಳಕಂಡಂತೆ ನೀಡಲಾಗಿದೆ.
ಕ್ರ. ಸಂ ಹುದ್ದೆಯ ಹೆಸರು ಮಂಜೂರಾದ ಹುದ್ದೆಗಳ ಸಂಖ್ಯೆ ಭರ್ತಿಯಾದ ಹುದ್ದೆಗಳ ಸಂಖ್ಯೆ ಖಾಲಿ ಹುದ್ದೆಗಳ ಸಂಖ್ಯೆ
1 ಕಾರ್ಯದರ್ಶಿ 1 1 -
2 ಅಧೀನ ಕಾರ್ಯದರ್ಶಿ 1 0 1
3 ಹಣಕಾಸು ನಿಯಂತ್ರಕರು 1 1 -
4 ಉಪ ನಿರ್ದೇಶಕರು (ಯೋಜನೆ) 1 1 -
5 ಕಾರ್ಯಪಾಲಕ ಇಂಜಿನಿಯರ್ 1 1 -
6 ಲೆಕ್ಕ ಅಧೀಕ್ಷಕರು 1 1 -
7 ಕಂಪ್ಯೂಟರ್ ಆಪರೇಟರ್ 1 - 1
8 ಪ್ರಥಮ ದರ್ಜೆ ಸಹಾಯಕರು 4 4 -
9 ದ್ವಿತೀಯ ದರ್ಜೆ ಸಹಾಯಕರು 2 1 1
10 ಶೀಘ್ರ ಲಿಪಿಗಾರರು 2 1 1
11 ವಾಹನ ಚಾಲಕರು 2 0 2
12 ಡಿ. ದರ್ಜೆ ನೌಕರರು 5 1 4
13 ದೈನಂದಿನ ವೇತನ ಕಲ್ಯಾಣ ಸಂಘ - 1(ವಾಹನ ಚಾಲಕರು), 1(ಡಿ. ದರ್ಜೆ ನೌಕರರು) -

ಅಧ್ಯಕ್ಷರ ಆಪ್ತ ಶಾಖೆ

ಕ್ರ. ಸಂ ಹುದ್ದೆಯ ಹೆಸರು ಮಂಜೂರಾದ ಹುದ್ದೆಗಳ ಸಂಖ್ಯೆ ಭರ್ತಿಯಾದ ಹುದ್ದೆಗಳ ಸಂಖ್ಯೆ ಖಾಲಿ ಹುದ್ದೆಗಳ ಸಂಖ್ಯೆ
1 ಆಪ್ತ ಕಾರ್ಯದರ್ಶಿ 1 1 -
2 ಗ್ರೂಪ್ “ಸಿ” 2 2 -
3 ಗ್ರೂಪ್ “ಡಿ” 2 1 1
4 ವಾಹನ ಚಾಲಕರು 1 1 -