ಪ್ರಗತಿ

  ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿಯು ಆಸ್ಥಿತ್ವಕ್ಕೆ ಬಂದ ದಿನದಿಂದಲು ಹಲವಾರು ಕಾರ್ಯಕ್ರಮ ಮತ್ತು ಯೋಜನೆಗಳನ್ನು ಒಳಗೊಂಡ ಕ್ರಿಯಾ ಯೋಜನೆಗಳನ್ನು ಸಿದ್ದ ಪಡಿಸಿ ಅನುಷ್ಟಾನಾಧಿಕಾರಿಗಳು ನಿರ್ವಹಿಸಿದ ಕಾರ್ಯವನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಮಲೆನಾಡು ಮತ್ತು ಪಶ್ಚಿಮ ಘಟ್ಟದ ಅಭಿವೃದ್ಧಿಗೆ ಅದರಲ್ಲು ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ ಸಂಪರ್ಕ ಕಲ್ಪಿಸುವ ರಸ್ತೆಗಳ ನಿರ್ಮಾಣ, ತೂಗುಸೇತುವೆಗಳ ನಿರ್ಮಾಣ, ಕಾಲುಸಂಕಗಳಂತಹ ಅನೇಕ ಕಾಮಗಾರಿಗಳನ್ನು ಮಂಡಳಿಯ ವತಿಯಿಂದ ನಿರ್ವಹಿಸಲಾಗಿದೆ. ವಿವಿಧ ಕಾರ್ಯಕ್ರಮಗಳಡಿಯಲ್ಲಿ ಇಲ್ಲಿಯವರೆಗೆ ಪ್ರಗತಿಸಿರುವ ಒಟ್ಟು ಕಾಮಗಾರಿಗಳ ವಿವರ ಕೆಳಕಂಡಂತಿರುತ್ತದೆ.


  ಮೇಲೆ ತಿಳಿಸಲಾದ ಕಾಮಗಾರಿಗಳ ಜೊತೆಗೆ ನಬಾರ್ಡ್ ಸಂಸ್ಥೆಯ ಸಹಕಾರ ಮತ್ತು ಸಹಾಯದೊಂದಿಗೆ 285 ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಿ ಒಟ್ಟು 1390.35 ಕಿ.ಮೀ ಉದ್ದದ ರಸ್ತೆಯನ್ನು ನಿರ್ಮಿಸಿಸಲಾಗಿರುತ್ತದೆ. ಹಾಗೂ 592.22 ಮೀಟರ್ ಉದ್ದದ ಸೇತುವೆಗಳನ್ನು ನಿರ್ಮಿಸಲಾಗಿರುತ್ತದೆ.


  ಮಲೆನಾಡು ಪ್ರದೇಶ ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ದಿ ಯೋಜನೆಗಳ ಅಡಿಯಲ್ಲಿ ವಿದ್ಯಾಬ್ಯಾಸಕ್ಕೆ ಹೆಚ್ಚು ಒತ್ತು ನೀಡುವ ಸಲುವಾಗಿ 1993-94 ರಿಂದ 2009-10ನೇ ಸಾಲಿನ ಅವಧಿಯಲ್ಲಿ ಸುಮಾರು 500 ಕಾಮಗಾರಿಗಳನ್ನು ಹಾಗೂ 2010-11ನೇ ಸಾಲಿನಲ್ಲಿ 3 ಕಾಮಗಾರಿಗಳನ್ನು ಮತ್ತು ಶಾಶ್ವತವಾದ ಆಸ್ತಿಯನ್ನು ಸೃಜಿಸುವಂತ ಮತ್ತು ಕಲಿಕೆಗೆ ಸಹಾಯವಾಗುವಂತಹಾ ಯೋಜನೆಗಳನ್ನು ನಿರ್ವಹಿಸಲಾಗಿರುತ್ತದೆ.


  1993-94 ರಿಂದ 2009-10ನೇ ಅವಧಿಯಲ್ಲಿ ಮಂಡಳಿಯಲ್ಲಿ ಲಭ್ಯವಿರುವ ಅಲ್ಪ ಅನುದಾನದಲ್ಲಿ ಸುಮಾರು 50 ಆರೋಗ್ಯ ಕೇಂದ್ರಗಳನ್ನು ಮಲೆನಾಡು ಪ್ರದೇಶ ವ್ಯಾಪ್ತಿಯಲ್ಲಿ ಬರುವ ಗುಡ್ಡಗಾಡುಗಳಲ್ಲಿ ಮತ್ತು ಅತೀ ಹೆಚ್ಚು ಮಳೆಯಿಂದಾಗಿ ಸಾರ್ವಜನಿಕರು ವಿವಿಧ ರೋಗಳಿಗೆ ತುತ್ತಾಗಿ ಆಸ್ಪತ್ರೆ ಸೌಖರ್ಯಗಳು ಇಲ್ಲದಿರುವ ಪ್ರದೇಶಗಳಲ್ಲಿ ತುರ್ತು ಸೇವೆ ನೀಡುವಂತಹ ಕೆಲವು ಚಿಕಿತ್ಸ ಕೇಂದ್ರಗಳನ್ನು ಮಂಡಳಿ ವತಿಯಿಂದ ತೆರೆಯಲಾಗಿರುತ್ತದೆ.


  ಸಣ್ಣ ನೀರಾವರಿ ವಿಭಾಗದಿಂದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಸಾಧ್ಯವೆಂಬ ವಿಷಯವನ್ನು ಮನಗಂಡು ಮಂಡಳಿ ವತಿಯಿಂದ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳಿಗೆ ಅನುಕೂಲಕರವಾದ ಕೃಷಿ ಹೊಂಡಗಳು, ಹರಿಯುವ ಹಳ್ಳಗಳಿಗೆ ತಡೆಗೋಡೆ ನಿರ್ಮಿಸಿ ನೀರಿನ ಮಟ್ಟವನ್ನು ವೃದ್ಧಿಸುವ ಕೆಲವು ಕಾರ್ಯಗಳು ಸಣ್ಣ ನೀರಾವರಿ ಯೋಜನೆಯಡಿಯಿದ್ದು, 1993-94ನೇ ಸಾಲಿನಿಂದ 2010-11ನೇ ಸಾಲಿನವರೆಗೂ 384 ಯೋಜನೆಗಳನ್ನು ಕೈಗೊಂಡಿರುತ್ತದೆ.


  ಗ್ರಾಮೀಣ ವ್ಯಾಪ್ತಿಯ ಜನರಿಗೆ ಕುಡಿಯುವ ನೀರಿನ ಸೌಕರ್ಯ ಕಲ್ಪಿಸುವುದು ಮಹತ್ತರ ಕಾರ್ಯವಾಗಿದ್ದು, ಶುದ್ದ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಮಿನಿವಾಟರ್ ಸಪ್ಲೇ ಯೋಜನೆ, ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಸಹಯೋಗದೊಂದಿಗೆ ಗ್ರಾಮೀಣ ಭಾಗದಲ್ಲಿ ಕೆಲವು ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲಾಗಿದೆ.


  1993-94 ರಿಂದ 2009-10 ರ ಅವಧಿಯಲ್ಲಿ ಮಲೆನಾಡು ಪ್ರದೇಶದ ಕೆಲವು ಆಯ್ದ ಭಾಗಗಳಲ್ಲಿ ಪಶು ಸಂಗೋಪನೆ ಚಟುವಟಿಕೆ ಪ್ರಮುಖ್ಯತೆ ನೀಡಿದ್ದು, ಕೆಲವು ರೈತರು ಕೃಷಿಗಿಂತ ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಾಣೆಯಲ್ಲಿ ಆಸಕ್ತಿ ತೋರುವುದನ್ನು ಮಂಡಳಿಯ ಸದಸ್ಯರುಗಳು ಪ್ರಸ್ತಾಪಿಸಿ ಅನುಕೂಲಕಾರವಾಗುವ ರೀತಿಯಲ್ಲಿ ಪಶುವೈದ್ಯ ಶಾಲೆಯನ್ನು ಪ್ರಾರಂಭಿಸಲು ಸುಮಾರು 62 ಆಸ್ಪತ್ರೆಗಳ ಕಟ್ಟಡ ನಿರ್ಮಾಣಕ್ಕೆ ಮಂಡಳಿಯವತಿಯಿಂದ ಯೋಜನೆಯನ್ನು ರೂಪಿಸಲಾಗಿರುತ್ತದೆ.


  ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಶಾಲೆಗೆ ಸೇರಿಕೊಳ್ಳುವುದನ್ನು ಹಾಗೂ ಹುಮ್ಮಸ್ಸಿನಿಂದ ಶಾಲೆಗೆ ಬರುವ ವಾತವರಣ ಕಲ್ಪಿಸುವ ದೃಷ್ಟಿಯಿಂದ “ಆಕರ್ಷಣಿಯವಾದ ಅಂಗನವಾಡಿ” ಕೇಂದ್ರಗಳನ್ನು ಸ್ಥಾಪಿಸುವ ಸಲುವಾಗಿ ವಿಶೇಷ ಯೋಜನೆಯನ್ನು ಸಿದ್ದಪಡಿಸಿ ಮಂಡಳಿಯಿಂದ ಈವರೆಗೆ 139 ಅಂಗನವಾಡಿ ಕೇಂದ್ರಗಳಿಗೆ ಕಟ್ಟಡಗಳನ್ನು ನಿರ್ಮಿಸಲಾಗಿರುತ್ತದೆ.


  ಮಲೆನಾಡು ಪ್ರದೇಶ ಮತ್ತು ಪಶ್ಚಿಮ ಘಟ್ಟದ ಎಲ್ಲಾ ಭಾಗದ ಜನರ ಹಾಗೂ ವಿವಿಧ ಸಮುಧಾಯದ ಬೇಡಿಕೆಗಳಾದ “ಸಮುದಾಯ ಭವನ”ಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಅದೇ ರೀತಿ ಗ್ರಾಮೀಣ ಪ್ರದೇಶದ ಜನರ ಕಲೆಯನ್ನು ಅಭ್ಯಾಸಿಸಲು ಹಾಗೂ ಪ್ರದರ್ಶೀಸಲು ಅನುಕೂಲವಾಗುವಂತ ರಂಗಮಂದಿರಗಳ ನಿರ್ಮಾಣವನ್ನು ಮಂಡಳಿ ವತಿಯಿಂದ ಹಮ್ಮಿಕೊಂಡು ಈವರೆಗೆ 2000ಕ್ಕೂ ಅಧಿಕವಾಗಿ ಸಮುದಾಯ ಭವನ ಮತ್ತು ರಂಗಮಂದಿರಗಳನ್ನು ನಿರ್ಮಿಸಲಾಗಿರುತ್ತದೆ.


  ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ವಿವಿಧ ಕಾಮಗಾರಿ ಬಂಡವಾಳ ವೆಚ್ಚ, ವಿಶೇಷ ಘಟಕ ಯೋಜನೆ ಹಾಗೂ ಪರಿಶಿಷ್ಟ ಪಂಗಡ ಉಪಯೋಜನೆ ಅಡಿಯಲ್ಲಿ ನಿರ್ವಹಿಸಲಾಗುತ್ತಿದ್ದು, ಈವರೆಗೆ ಹಲವಾರು ರಸ್ತೆಗಳ ನಿರ್ಮಾಣ, ಗ್ರಾಮೀಣ ರಸ್ತೆಗಳ ಡಾಂಬರೀಕರಣ, ಕಾಂಕ್ರೀಟ್ ರಸ್ತೆಗಳ ನಿರ್ಮಾಣ, ಚರಂಡಿಗಳ ನಿರ್ಮಾಣ, ಸಮುದಾಯ ಭವನ ಕಟ್ಟಡಗಳು, ರಂಗಮಂದಿರಗಳು, ತೂಗುಸೇತುವೆಗಳು, ಕಾಲುಸಂಕಗಳು, ಆಸ್ಪತ್ರೆ ಕಟ್ಟಡಗಳು, ನೀರಿನ ತಡೆಗೋಡೆಗಳು, ಕೃಷಿ ಹೊಂಡಗಳು, ಸಣ್ಣ ನೀರಾವರಿ ಯೋಜನೆ ಕಾರ್ಯಕ್ರಮಗಳು, ಅಂಗನವಾಡಿ ಕಟ್ಟಡಗಳು ಈ ರೀತಿ ಸುಮಾರು 19913 ಕಾಮಗಾರಿಗಳನ್ನು 1993-94 ರಿಂದ ಇಲ್ಲಿಯವರೆಗೆ ನಿರ್ವಹಿಸಲಾಗಿದೆ.